ಈ ವಾರ `ಮುದ್ದುಮನಸೇ` ತೆರೆಗೆ
Posted date: 26 Wed, Aug 2015 – 06:10:54 PM

ಮುದ್ದು ಮುದ್ದಾದ ಚಟುವಟಿಕೆಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮುದ್ದು ಮನಸೇ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆಕಾಣಲು ಸಜ್ಜಾಗಿದೆ. ರೋಮ್ಯಾಂಟಿಕ್, ಆಕ್ಷನ್ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯಾ ನಾಗ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಮುದ್ದು ಮನಸೇ’ ಚಿತ್ರದ ಟ್ರೈಲರ್ ಇದೀಗಲೇ ಭಾರೀ ಸದ್ದು ಮಾಡಿದೆ. ಅದಕ್ಕೆ ಸಿಕ್ಕಿರುವ ಭಾರೀ ಜನಪ್ರಿಯತೆಯೇ ಚಿತ್ರದ ಗೆಲುವಿನ ದಿಕ್ಸೂಚಿ ಎಂದೂ ಬಿಂಬಿಸಲ್ಪಡುತ್ತಿದೆ. ಎಮ್.ಎಮ್.ಎಸ್ ಮೂವೀಸ್ ಅರ್ಪಿಸುತ್ತಿವ ‘ಮುದ್ದು ಮನಸೇ’ ಚಿತ್ರದಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಪಕ್ಕಾ ಆಕ್ಷನ್ ಸೀನ್ ಗಳಿದ್ದು, ಚಿತ್ರದ ನಾಯಕ ಅರುಣ್ ಗೌಡ ಇಬ್ಬರು ನಾಯಕಿಯರ ನಡುವೆ ಡ್ಯುಯೆಟ್ ಹಾಡಿದ್ದಾರೆ.
ಮೂರು ಮುದ್ದಾದ ಮನಸ್ಸುಗಳ ನಡುವೆ ನಡೆಯುವ ಕಥೆಯೇ ‘ಮುದ್ದು ಮನಸೇ’. ಈ ಚಿತ್ರದಲ್ಲಿ ನಾಯಕ ಅರುಣ್ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಶೇಡ್‌ನಲ್ಲಿ ಅರುಣ್‌ಗೆ ನಿತ್ಯಾ ರಾಮ್ ನಾಯಕಿಯಾದರೆ, ಸಿಟಿಯಲ್ಲಿ ಗಂಡುಬೀರಿ ನಾಯಕಿ ಐಶ್ವರ್ಯ ಜೊತೆಯಾಗುತ್ತಾರೆ. ಸ್ಯಾಂಡಲ್ ವುಡ್‌ನಲ್ಲಿ ಸದ್ಯಕ್ಕೆ ಲೀಡ್‌ನಲ್ಲಿರುವ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಹಾಗೂ ಐಶ್ವರ್ಯ ನಾಗ್ ಅರುಣ್‌ಗೆ ಜೋಡಿಯಾಗಿದ್ದಾರೆ. ನಿರ್ದೇಶಕ ಅನಂತ್ ಶೈನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರಕ್ಕೆ ವಿನೀತ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಖತ್ ಡೈಲಾಗ್ಸ್, ಹಾಡುಗಳ ಜೊತೆ ಲವ್ ಸೆಂಟಿಮೆಂಟ್ ಇರುವ ‘ಮುದ್ದು ಮನಸೇ’ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ ಎಂಬುದು ಚಿತ್ರ ತಂಡದ ಭರವಸೆ. ಈ ಸಿನಿಮಾ ವಿಶೇಷತೆ ಅಂದರ್ರೆ ೬ ನಿರ್ದೇಶಕರು ಚಿತ್ರದ ಆರು ಹಾಡುಗಳಿಗೆ ಸಾಹಿತ್ಯ ಒದಗಿಸಿದಾರೆ. ಶಶಾಂಕ್ ಬರೆದಿರುವ ಕೊಯ್ಯ ಕೊಯ್ಯ ಹಾಡು, ಯೋಗರಾಜ್ ಭಟ್ರು ಬರೆದಿರುವ ನಾವು ಹೇಳಬಾರದು ನೀವು ಕೇಳಬಾರದು ಸಾಂಗ್ಸ್ ಅಂತೂ ಸಖತ್ ಸೌಂಡ್ ಮಾಡಿವೆ. ಇನ್ನೂ ಈ ಚಿತ್ರದ ತಾಯಿ ಸೆಂಟಿಮೆಂಟ್ ಸಾಂಗ್ ವೊಂದನ್ನ ಜೋಗಿ ಪ್ರೇಮ್ ಹಾಡಿರೋದು ಮತ್ತೊಂದು ವಿಶೇಷ. ಸಂತು ಬರೆದಿರೋ ಈ ಹಾಡನ್ನು ಪ್ರೇಮ್ ಹಾಡಿದಾರೆ.
ರಮೇಶ್, ಜೀವನ್‌ಶೆಟ್ಟಿ, ಸುರೇಶ್‌ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಬಾಹುಬಲಿ ವಿತರಣೆ ಮಾಡಿದ ಆರ್.ಎಸ್.ಪ್ರೊಡಕ್ಷನ್‌ರವರು ಚಿತ್ರವನ್ನು  ಬಿಡುಗಡೆ ಮಾಡುತ್ತಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed